ಕಾರ್ಮಿಕರಿಗೆ ರಜೆ ಕಾರ್ಯಕ್ರಮಗಳು
Government of Karnataka - Labor Department worker vacation program
There are 40,00,000 registered workers under labour department in Karnataka
They do not have a mandatory leave program like everybody else
They almost never get to go on leisure vacations along with family
Felicitates family and kids to see new places within the state which otherwise does not happen
Five Places must see in Karnataka
ಉಡುಪಿ
ಉಡುಪಿ ನೈಋತ್ಯ ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಇದು ತನ್ನ ಹಿಂದೂ ದೇವಾಲಯಗಳಿಗೆ ಹೆಸರುವಾಸಿಯಾಗಿದೆ, 13 ನೇ ಶತಮಾನದ ಬೃಹತ್ ಶ್ರೀ ಕೃಷ್ಣ ದೇವಾಲಯ, ಇದು ಕೃಷ್ಣನ ಪ್ರತಿಮೆಯನ್ನು ಹೊಂದಿದೆ ಮತ್ತು ಅನೇಕ ಯಾತ್ರಿಕರನ್ನು ಆಕರ್ಷಿಸುತ್ತದೆ. ಸಮೀಪದಲ್ಲೇ ಇರುವ ಪುರಾತನವಾದ ಅನಂತೇಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ.
ಮೈಸೂರು
ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಅರಮನೆಗಳ ನಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ.
ತಲಕಾವೇರಿ
ತಲಕಾವೇರಿ - ದಕ್ಷಿಣಭಾರತದಲ್ಲಿ ಹರಿಯುವ ಕಾವೇರಿ ನದಿಯ ಉಗಮ ಸ್ಥಾನ. ಕರ್ನಾಟಕ ರಾಜ್ಯದಲ್ಲಿರುವ ಕೊಡುಗೆ ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿಯಲ್ಲಿ ಭಾಗಮಂಡಲದ ಪಶ್ಚಿಮಕ್ಕೆ, ಪಶ್ಚಿಮ ಘಟ್ಟಗಳಲ್ಲಿರುವ ಬ್ರಹ್ಮಗಿರಿಯ ಇಳಿಜಾರಿನಲ್ಲಿ (ಉ.ಅ. 120 25' ; ಪೂ. ರೇ. 750 34') ಇದೆ. ಮಡಿಕೇರಿಯಿಂದ 39 ಕಿಮೀ, ದೂರದಲ್ಲಿರುವ ಭಾಗಮಂಡಲಕ್ಕೂ ತಲಕಾವೇರಿಗೂ 8 ಕಿಮೀ. ಉದ್ದದ ವಾಹನಯೋಗ್ಯ ರಸ್ತೆಯಿದೆ.
ಹಂಪೆ
ಹಂಪಿಯು ತುಂಗಭದ್ರಾ ನದಿಯ ತೀರದಲ್ಲಿದೆ. ಇದು ಬೆಂಗಳೂರಿನಿಂದ ೩೪೩ ಕಿ.ಮೀ., ಬಿಜಾಪುರದಿಂದ ೨೫೪ ಕಿ.ಮೀ., ಮತ್ತು ಬಳ್ಳಾರಿಯಿಂದ ೭೪ ಕಿ.ಮೀ ದೂರದಲ್ಲಿದೆ. ೧೩ ಕಿ.ಮೀ. ದೂರದಲ್ಲಿರುವ ಹೊಸಪೇಟೆ ಇಲ್ಲಿಗೆ ಅತಿ ಹತ್ತಿರದ ತಾಲ್ಲೂಕು ಕೇಂದ್ರ. ವ್ಯವಸಾಯ, ವಿರೂಪಾಕ್ಷ ಹಾಗೂ ಕೆಲವು ಇತರ ದೇವಸ್ಥಾನಗಳ ನಿರ್ವಹಣೆ ಮತ್ತು ಪ್ರವಾಸೋದ್ಯಮ, ಇವುಗಳು ಇಲ್ಲಿನ ಮುಖ್ಯ ಚಟುವಟಿಕೆ. ಕರ್ನಾಟಕ ಸರ್ಕಾರವು ಆಯೋಜಿಸುವ ವಿಜಯನಗರ ವಾರ್ಷಿಕೋತ್ಸವವು ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ನಡೆಯುತ್ತದೆ.
ಕಬಿನಿ
ಕಬಿನಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಮೈಸೂರು ಜಿಲ್ಲೆಯ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿ ಮತ್ತು ಬಿದರಹಳ್ಳಿ ಗ್ರಾಮಗಳ ಬಳಿ ಕಬಿನಿ ಅಣೆಕಟ್ಟನ್ನು ಕಟ್ಟಲಾಗಿದೆ. ಕಾವೇರಿ ನದಿಯ ಕೆಳಮುಖ ಭಾಗವಾಗಿ ಕಬಿನಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ